ಯಾಕೋ ತಿಳಿಯುತ್ತಿಲ್ಲ….

ಸುರಿವ ಮಳೆಯಲ್ಲಿ ನಿನ್ನ ನೆನಪಾಗುತ್ತಿದೆ
ಯಾಕೋ ಗೊತ್ತಿಲ್ಲ.
ಮಳೆಯ ಹನಿಗಳ ಜತೆ ನನ್ನ ಕಂಬನಿಯೂ ಹರಿಯುತ್ತಿದೆ..
ಸಂತೋಷಕ್ಕೋ..? ವಿಷಾದಕ್ಕೋ..?
ತಿಳಿಯುತ್ತಿಲ್ಲ..

ಹೀಗೆ ನಿನ್ನ ನೆನೆಸಿಕೊಂಡು ಬರೆಯುತ್ತೇನೆ,
ಬರೆದು ನಿರಾಳವಾಗುತ್ತೇನೆ,
ನಿನ್ನ ನೆನಪಾದ ಸಂತೋಷಕ್ಕೋ ?
ಬರೆದು, ಭಾವದ ಬಸಿರು ಕಳಕೊಂಡ ನೆಮ್ಮದಿಗೋ ?
ತಿಳಿಯುತ್ತಿಲ್ಲ..

ಬೆಳದಿಂಗಳು ಕಂಡಾಗ ನಿನ್ನ ನಗು ನೆನಪಾಗುತ್ತದೆ,
ನಿನ್ನೊಡನೆ ಕೂತು ಚಂದಿರನ ಗೇಲಿ ಮಾಡಿದ್ದು ನೆನಪಾಗುತ್ತದೆ,
ಹಾಗೆಯೇ ನನ್ನ ಕಣ್ಣು ತುಂಬುತ್ತದೆ
ನಿನ್ನ ನಗೆ ನೆನಪು ಕೊಟ್ಟ ನೋವಿಗೋ ?
ಹೊಳೆವ ಚಂದಿರನ ದಿಟ್ಟಿಸಿದ್ದಕ್ಕೋ ?
ತಿಳಿಯುತ್ತಿಲ್ಲ..

ನೀನು ಬೆನ್ನು ತಿರುಗಿಸಿ ಹೋದ ಹಾದಿ ಹಿಡಿಯುತ್ತೇನೆ,
ನಿನ್ನ ಹೆಜ್ಜೆ ಗುರುತು ಅರಸುತ್ತೇನೆ,
ಯಾಕೋ ಕಾಲ್ಗಳು ಭಾರವಾಗಿ ನಿಲ್ಲುತ್ತವೆ,
ನಿನ್ನ ಹೆಜ್ಜೆ ನೋಡಿದ ಸಂತಸಕ್ಕೋ ?
ನಿನ್ನ ಹಾದಿಗುಂಟ ನಡೆದ ಆಯಾಸಕ್ಕೋ ?
ತಿಳಿಯುತ್ತಿಲ್ಲ..

ನಿನ್ನ ನೆನೆಸಿಕೊಳ್ಳಬಾರದೆಂದುಕೊಳ್ಳುತ್ತೇನೆ
ಆದರೂ ನೆನೆಸಿಕೊಳ್ಳುತ್ತೇನೆ
ನಿನ್ನ ಮರೆಯಬೇಕೆನ್ನುವುದಕ್ಕೋ ?
ನಿನ್ನ ನೆನಪು ಕಳೆಯಬಾರದೆನ್ನುವುದಕ್ಕೋ ?
ತಿಳಿಯುತ್ತಿಲ್ಲ..

                                            — ಗಣೇಶ… :-)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.