ನೀನು ಬಿಟ್ಟ ನನ್ನ ಬದುಕು,
ಆಗಿದೆ ನೋವಿಗೆ ನಿಲ್ದಾಣ.
ತುಂಬಿ ಸುರಿವ ಕಣ್ಣ ಹನಿಗೆ,
ಪಾಪ, ಗುರಿಯಿರದ ಪಯಣ.
ಕೊರೆವ ಹಾಡಾದ ನಿನ ನೆನಪು,
ಕೊಲುತಿದೆ ಮನವ ಪ್ರತಿಕ್ಷಣ.
ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.
ಒಲವಿರದ ಮನದ ಮುಗಿಲಲಿ,
ಬತ್ತಿದೆ ನೂರು ಕನಸು.
ಕನಸ ಹನಿಗೆ ಕಾದ ಜೀವಕೆ,
ಬಂದಿದೆ ನನಮೇಲೆ ಮುನಿಸು.
ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.
ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ ಹೃದಯ.
ಮಗುವ ನಗುವಾದ ನಿನ್ನೊಲವಿಗೆ,
ಇಷ್ಟು ಕೋಪ ಕಲಿಸಿದವರಾರು.
ಎಚ್ಚರ ಇಲ್ಲದ ನನ ಮನವ,
ಮತ್ತೆ ಎಚ್ಚರಿಸುವರಾರು.
ಬರಿದೆ ಪದವಲ್ಲದ ಈ ಹಾಡ,
ನೀ ಬಂದು ಕೇಳುವುದೆಂದು.
ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು,
ನನ್ನ ಮನದ ಮುಗಿಲಲಿ ಇಂದು.
—- ಗಣೇಶ….
Advertisement