ಸಾವಿರ ಪೆಟ್ಟು ಕೊಟ್ಟರು ನಾ ಬೀಳುವುದಿಲ್ಲವೆನುತ ಕೋಟಿ ಕೋಟಿ ಜನರ ಪೊರೆಯುತ್ತಿರುವ ಮುಂಬೈ ಎಂಬ ಮಹಾ ತಾಯಿಗೆ, ಏನೇ ಆಗಲಿ ಹೀಗೆ ಇರುವೆವು ಎಂದು ಮೊಗದಲ್ಲಿ ತುಂಬು ನಗೆಯ ಸೂಸುವ ಮುಂಬೈ ಮಹಾ ಜನತೆಗೆ ಕಣ್ತುಂಬಿ ನಮಿಸುತ್ತಾ ಅಗಲಿದ ಬಂಧುಗಳಿಗೆ ನಮ್ಮ ನಮನಗಳನ್ನು ಸಲಿಸೋಣ…
ಆರಿ ಹೋದವು
ನೂರು ದೀವಿಗೆಗಳು
ಕೋಟಿ ಕಂಗಳ ಬೆಳಕ ಕಾಯಲು
ಕರಗಿ ಹೋದವು
ಸಾವಿರ ಆಸೆಗಳು
ಕೋಟಿ ಭಾವಗಳ ಒಂದು ಮಾಡಲು
ಕೋಟಿ ಪ್ರಣಾಮಗಳು
ಆ ಬೆಳಕ ಕಾಯ್ದ
ಉಕ್ಕು ಕೈಗಳಿಗೆ
ಅನಂತ ನಮನಗಳು
ಆ ಬೆಳಕಿಗುಸಿರು ಹೊಯ್ದ
ಅಮರ ಜೀವಗಳಿಗೆ
ಧಿಕ್ಕಾರವಿರಲಿ
ನಡೆದಾಡುವ ಪಿಶಾಚಗಳು
ಮಾನವರಾದುದಕ್ಕೆ
ಧಿಕ್ಕಾರವಿರಲಿ
ಅವ ಪೊರೆದು ತಾ ಬದುಕುವ
ರಕ್ತ ಪಿಪಾಸುಗಳಿಗೆ
ಇನ್ನಾದರೂ
ಮೇಲೇಳುವ
ಈ ಹಾಳು ನಿದ್ದೆ ಸಾಕು ಮಾಡಿ
ಅಲ್ಲಿರುವ ಸ್ವರ್ಗವ
ಭೂಮಿಗಿಳಿಸುವ
ಒಂದೇ ಸಂಕಲ್ಪ ಮಾಡಿ
—ಗಣೇಶ